ಹಾಲೊಲ್: ರಾಜ್ಯದಲ್ಲಿ ಹೂಡಿಕೆದಾರರಿಗೆ ಶೇ.100 ರಷ್ಟು ಸುರಕ್ಷತೆಯಿದೆ. ಹೂಡಿಕೆಗೆ ಯಾವುದೇ ಅಪಾಯವಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ಹೂಡಿಕೆದಾರರಿಗೆ ಭರವಸೆ ನೀಡಿದ್ದಾರೆ. ಸಿಯೆಟ್ ರೇಡಿಯಲ್ ಟೈರ್ಸ್ನ 700 ಕೋಟಿ ವೆಚ್ಚದ ಘಟಕಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುಜರಾತ್ ರಾಜ್ಯ ಉದ್ಯೋಗಿಗಳಿಗೆ ಮುಖ್ಯ ಕೇಂದ್ರವಾಗಲಿದೆ. ಭಾರತದ ಅಭಿವೃದ್ಧಿಗೆ ಮುಖ್ಯ ದ್ವಾರವಾಗಲಿದೆ ಎಂದರು. |