ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಮೀಕ್ಷೆಯಂತೆ ಹಣದುಬ್ಬರ ಇಳಿಕೆಯಾಗಿ ವಾಸ್ತವಿಕ ಮಟ್ಟವನ್ನು ತಲುಪಲಿದ್ದು, ಆರ್ಥಿಕ ಕುಸಿತದ ಭಯ ಬೇಡ ಎಂದು ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಚಾವ್ಲಾ ಹೇಳಿದ್ದಾರೆ.
ಹಣದುಬ್ಬರ ಇಳಿಕೆಯಿಂದಾಗಿ ಆರ್ಥಿಕ ಕುಸಿತ ಎದುರಾಗುತ್ತದೆ ಎಂದು ಭಾವಿಸಬೇಕಾಗಿಲ್ಲ. ಆರ್ಥಿಕ ಕುಸಿತದ ಭಯ ಬೇಡ ಎಂದು ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಶೋಕ್ ಚಾವ್ಲಾ ತಿಳಿಸಿದ್ದಾರೆ.
ಹಣದುಬ್ಬರ ದರ ವಾಸ್ತವತೆಗೆ ಹತ್ತಿರವಾಗಲಿದ್ದು, ಬೇಡಿಕೆ ಕುಸಿತವಾಗಲಿದೆ. ಸಧ್ಯದ ಸ್ಥಿತಿಯಲ್ಲಿ ನಾವು ಹಣದುಬ್ಬರದ ಇಳಿಕೆಯತ್ತ ಸಾಗುತ್ತಿದ್ದೇವೆ ಹೊರತು ಆರ್ಥಿಕ ಕುಸಿತದತ್ತ ಸಾಗುತ್ತಿಲ್ಲ ಎಂದು ವಿವರಿಸಿದ್ದಾರೆ.
ಕಳೆದ ಅಗಸ್ಟ್ ತಿಂಗಳಲ್ಲಿ ಶೇ.12.91 ರಷ್ಟು ಏರಿಕೆ ಕಂಡಿದ್ದ ಹಣದುಬ್ಬರ ಜನವೆರಿ ತಿಂಗಳಲ್ಲಿ ಶೇ.6ಕ್ಕೆ ಇಳಿಕೆಯಾಗಿದೆ. ಆರ್‌ಬಿಐ ಸಮೀಕ್ಷೆಯಂತೆ ಶೇ.3ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. |