ದೇಶದ ಬೃಹತ್ ಕಾರು ತಯಾರಿಕೆ ಸಂಸ್ಥೆಯಾದ ಮಾರುತಿ ಸುಝುಕಿ ಇಂಡಿಯಾ, ಇತ್ತೀಚೆಗೆ ಬಿಡುಗಡೆಯಾದ ಎ .ಸ್ಟಾರ್ ಮಾಡೆಲ್ ಸೇರಿದಂತೆ ವಿವಿಧ ಮಾಡೆಲ್ಗಳ ಮೇಲೆ 5 ಸಾವಿರ ರೂಪಾಯಿಗಳಿಂದ 10 ಸಾವಿರ ರೂಪಾಯಿಗಳವರೆಗೆ ದರ ಹೆಚ್ಚಳ ಮಾಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ನವೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ ಜಾಗತಿಕ ಮಟ್ಟದ 'ಎ ಸ್ಟಾರ್' ಸಣ್ಣ ಕಾರಿನ ಆರಂಭಿಕ ದರವನ್ನು ಕಂಪೆನಿ ಹಿಂತೆಗೆದುಕೊಂಡಿದ್ದು, ವಿವಿಧ ಮಾಡೆಲ್ಗಳ ದರಗಳನ್ನು 10 ಸಾವಿರ ರೂಪಾಯಿಗಳವರೆಗೆ ಹೆಚ್ಚಳ ಮಾಡಿದೆ.
ಸ್ವಿಫ್ಟ್ ಮಾಡೆಲ್ನ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ದರಗಳನ್ನು 5 ಸಾವಿರ ರೂಪಾಯಿಗಳಿಂದ 6 ಸಾವಿರ ರೂಪಾಯಿಗಳವರೆಗೆ ಹೆಚ್ಚಳ ಮಾಡಿದ್ದು, ಸೆಡಾನ್ ಸ್ವಿಫ್ಟ್ ಡಿಸೈರ್ ಕಾರುಗಳ ದರಗಳಲ್ಲಿ 7 ಸಾವಿರ ರೂಪಾಯಿಗಳವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. |