ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂನಲ್ಲಿ ಭಾಗಿಯಾದವರ ಅಮಾನತು:ಪಿಡಬ್ಲೂಸಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂನಲ್ಲಿ ಭಾಗಿಯಾದವರ ಅಮಾನತು:ಪಿಡಬ್ಲೂಸಿ
ಸತ್ಯಂ ಹಗರಣದಲ್ಲಿ ಬಂಧಿತರಾದ ಶ್ರೀನಿವಾಸ್ ತಲ್ಲೂರಿ ಮತ್ತು ಎಸ್‌.ಗೋಪಾಲ್‌ ಕೃಷ್ಣನ್ ಅವರನ್ನು ಲೆಕ್ಕಪರಿಶೋಧಕ ಸಂಸ್ಥೆ, ಪ್ರೈಸ್ ವಾಟರ್ ಹೌಸ್ ಅಮಾನತುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರೈಸ್ ವಾಟರ್ ಹೌಸ್ ಸಂಸ್ಥೆಯ ಎಲ್ಲ ಕಾರ್ಯಕಲಾಪಗಳಿಂದ ಪಾಲುದಾರರಾದ ಎಸ್‌.ಗೋಪಾಲ್‌ಕೃಷ್ಣನ್ ಮತ್ತು ಶ್ರೀನಿವಾಸ್ ತಲ್ಲೂರಿ ಅವರನ್ನು ಅಮಾನತುಗೊಳಿಸಲಾಗಿದ್ದು, ಸತ್ಯಂ ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಆಂಧ್ರ ಪ್ರದೇಶದ ಅಪರಾಧ ಪತ್ತೆ ದಳ, ಪ್ರೈಸ್ ವಾಟರ್ ಹೌಸ್‌ ಪಾಲುದಾರರಾದ ಎಸ್‌.ಗೋಪಾಲ್‌ಕೃಷ್ಣನ್ ಮತ್ತು ಶ್ರೀನಿವಾಸ್ ತಲ್ಲೂರಿ ಅವರನ್ನು ಸತ್ಯಂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಿ ಬಂಧಿಸಿತ್ತು.

ಎಸ್‌.ಗೋಪಾಲ್‌ಕೃಷ್ಣನ್ ಮತ್ತು ಶ್ರೀನಿವಾಸ್ ತಲ್ಲೂರಿ ಇಬ್ಬರು ಪಾಲುದಾರರನ್ನು ಅಮಾನತುಗೊಳಿಸಲಾಗಿದ್ದು, ಗ್ರಾಹಕರ ಯಾವುದೇ ವಿಷಯದಲ್ಲಿ ಭಾಗಿಯಾಗಬಾರದು ಹಾಗೂ ಸಂಸ್ಥೆಯ ಕಾರ್ಯಕಲಾಪದಲ್ಲಿ ಮಧ್ಯಸ್ಥಿಕೆ ವಹಿಸಬಾರದು ಎಂದು ಕಂಪೆನಿ ಅಮಾನತುಗೊಂಡ ಪಾಲುದಾರರಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರುತಿ ಕಾರುಗಳ ದರ ಹೆಚ್ಚಳ
ಹಣದುಬ್ಬರ ಇಳಿಕೆ, ಆರ್ಥಿಕ ಕುಸಿತವಿಲ್ಲ ಚಾವ್ಲಾ
ಸತ್ಯಂ ಹಗರಣ ವಿಚಾರಣೆ
ಕೈಗಾರಿಕೆ ಇಳಿಮುಖ: ಆರ್‌ಬಿಐ
ಹೂಡಿಕೆದಾರರಿಗೆ ಮೋದಿ ಭರವಸೆ
11 ಲಕ್ಷ ಏಜೆಂಟರ ನೇಮಕ: ಎಲ್‌ಐಸಿ