ಮುಂಬೈ ಜವಳಿ ಕ್ಷೇತ್ರಕ್ಕೆ ಸೀಮಿತವಾದ ಉತ್ತೇಜನ ಪ್ಯಾಕೇಜ್ ಅಗತ್ಯವಾಗಿದ್ದು, ಶೇ.2 ರಷ್ಟು ಧನ ಸಹಾಯ ಮತ್ತು ಜವಳಿ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಆದಾಯ ತೆರಿಗೆಯನ್ನು ರದ್ದುಗೊಳಿಸಬೇಕು ಎಂದು ಅಖಿಲ ಭಾರತ ಉಡುಪು ಉತ್ಪಾದಕ ಸಂಘ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಕಳೆದ ವಾರ ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ವಾಣಿಜ್ಯ ಸಚಿವಾಲಯಕ್ಕೆ ಜವಳಿ ಕ್ಷೇತ್ರಕ್ಕೆ ಉತ್ತೇಜನ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಾಗಿದೆ ಎಂದು ಅಖಿಲ ಭಾರತ ಉಡುಪು ಉತ್ಪಾದಕ ಸಂಘದ ಅಧ್ಯಕ್ಷರಾದ ರಾಹುಲ್ ಮೆಹತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜವಳಿ ಕ್ಷೇತ್ರಕ್ಕೆ ಶೇ. ರಷ್ಟು ಧನ ಸಹಾಯವನ್ನು ನೀಡುವುದಲ್ಲದೇ ಆದಾಯ ತೆರಿಗೆಯನ್ನು ರದ್ದುಗೊಳಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮೆಹತಾ ತಿಳಿಸಿದ್ದಾರೆ.
ಕೇಂದ್ರ ಸರಕಾರ ಡಿಸೆಂಬರ್ 7 ರಂದು ಘೋಷಿಸಲಾದ ಪ್ಯಾಕೇಜ್‌ನಲ್ಲಿ ಮಾರ್ಚ್ 2009ರ ವರೆಗೆ ಶೇ. 2ರಷ್ಟು ಧನಸಹಾಯ ಮಾಡುವುದಾಗಿ ಘೋಷಿಸಿತ್ತು. ಆದರೆ ಜವಳಿ ಕ್ಷೇತ್ರಕ್ಕೆ ನಿಗದಿಪಡಿಸಿದ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು. |