ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ವಹಿವಾಟು ಮಾರಾಟಕ್ಕಿಲ್ಲ:ಮನೋಹರನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ವಹಿವಾಟು ಮಾರಾಟಕ್ಕಿಲ್ಲ:ಮನೋಹರನ್
ಸತ್ಯಂ ವಹಿವಾಟಿನ ಕೆಲ ವಿಭಾಗಗಳನ್ನು ಮಾರಾಟ ಮಾಡುವ ವರದಿಗಳನ್ನು ತಳ್ಳಿ ಹಾಕಿದ ಸತ್ಯಂ ನಿರ್ದೇಶಕ ಮಂಡಳಿ, ವ್ಯವಸ್ಥಾಪಕ ಸಲಹೆಗಾರ ಹಾಗೂ ಇಬ್ಬರು ಹೂಡಿಕೆದಾರರನ್ನು ನೇಮಕ ಮಾಡಿದೆ ಎಂದು ಸತ್ಯಂನ ನೂತನ ನಿರ್ದೇಶಕ ಟಿ.ಎನ್‌ ಮನೋಹರನ್ ತಿಳಿಸಿದ್ದಾರೆ.

ಪ್ರಸಕ್ತ ಸ್ಥಿತಿಯಲ್ಲಿ ಸತ್ಯಂನ ಕೆಲ ವಹಿವಾಟುಗಳನ್ನು ಮಾರಾಟ ಮಾಡುವುದು ನಿಯಮಗಳಿಗೆ ವಿರುದ್ಧವಾಗಿದ್ದು,ಕೇಂದ್ರ ಸರಕಾರ ಮಧ್ಯಸ್ಥಿಕೆವಹಿಸಿರುವುದರಿಂದ ಮಾರಾಟ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನೂತನ ನಿರ್ದೇಶಕ ಮಂಡಳಿ ಸ್ಪಷ್ಟಪಡಿಸಿದೆ.

ದೇಶ ವಿದೇಶಗಳ ಅನೇಕ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಸತ್ಯಂನ ಬಿಪಿಒ ಸೇರಿದಂತೆ ಮತ್ತಿತರ ಕೆಲ ವಹಿವಾಟುಗಳನ್ನು ಖರೀದಿಸಲು ಆಸಕ್ತಿ ವಹಿಸಿದ್ದು, ಇಂಜಿನಿಯರಿಂಗ್ ದೈತ್ಯ ಕಂಪೆನಿಯಾದ ಎಲ್‌ ಆಂಡ್ ಟಿ ಮುಕ್ತ ಮಾರುಕಟ್ಟೆಯ ಮೂಲಕ ಶೇರುಗಳನ್ನು ಖರೀದಿಸಿ ಸತ್ಯಂ ಶೇರುಗಳ ದರಗಳಲ್ಲಿ ಶೇ.12ರಷ್ಟು ಏರಿಕೆ ಮಾಡಿದೆ.

ಬೊಸ್ಟೊನ್ ಕನ್ಸಲ್‌ಟಿಂಗ್ ಗ್ರೂಪ್‌ ಕಂಪೆನಿಯನ್ನು ಸತ್ಯಂ ವ್ಯವಸ್ಥಾಪಕ ಸಲಹೆಗಾರರನ್ನಾಗಿ ನೇಮಕ ಮಾಡಿದ್ದು, ನಿರ್ದೇಶಕರಿಗೆ, ಕಂಪೆನಿಯ ಸಿಬ್ಬಂದಿಗೆ ಅಡಳಿತಾತ್ಮಕ ವಿಷಯಗಳಲ್ಲಿ ಬೆಂಬಲ ನೀಡಲಿದೆ ಎಂದು ಸತ್ಯಂ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜವಳಿ ಕ್ಷೇತ್ರಕ್ಕೆ ಉತ್ತೇಜನ ಪ್ಯಾಕೇಜ್‌: ರಾಹುಲ್
ಸತ್ಯಂನಲ್ಲಿ ಭಾಗಿಯಾದವರ ಅಮಾನತು:ಪಿಡಬ್ಲೂಸಿ
ಮಾರುತಿ ಕಾರುಗಳ ದರ ಹೆಚ್ಚಳ
ಹಣದುಬ್ಬರ ಇಳಿಕೆ, ಆರ್ಥಿಕ ಕುಸಿತವಿಲ್ಲ ಚಾವ್ಲಾ
ಸತ್ಯಂ ಹಗರಣ ವಿಚಾರಣೆ
ಕೈಗಾರಿಕೆ ಇಳಿಮುಖ: ಆರ್‌ಬಿಐ