ಏಷ್ಯಾ ಶೇರುಪೇಟೆಗಳ ಸ್ಥಿರತೆಯಿಂದಾಗಿ ದೇಶಿಯ ಶೇರುಪೇಟೆ ಕೂಡಾ ಚೇತರಿಕೆಯಾಗುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಡಾಲರ್ಗಳ ಮಾರಾಟದಲ್ಲಿ ತೊಡಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 12 ಪೈಸೆ ವೃದ್ಧಿಯಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ಗೆ 48.82 ರೂಪಾಯಿಗಳಿಗೆ ತಲುಪಿತ್ತು. ಇಂದಿನ ವಹಿವಾಟಿನಲ್ಲಿ ಮತ್ತೆ 12 ಪೈಸೆ ಏರಿಕೆಯಾಗಿ ಡಾಲರ್ಗೆ 48.94/95 ರೂಪಾಯಿಗಳಿಗೆ ತಲುಪಿದೆ.ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 31 ಪೈಸೆ ಏರಿಕೆಯಾಗಿ 48.94/95 ರೂಪಾಯಿಗಳಿಗೆ ತಲುಪಿತ್ತು.ದೇಶಿಯ ಶೇರುಪೇಟೆ ಚೇತರಿಕೆಯಿಂದಾಗಿ ಬಂಡವಾಳ ಒಳಹರಿವು ಹೆಚ್ಚಳವಾಗಿದ್ದರಿಂದ, ರೂಪಾಯಿ ವಹಿವಾಟಿಗೆ ಬೆಂಬಲ ದೊರೆತು ಡಾಲರ್ ಎದುರಿಗೆ ಏರಿಕೆ ಕಂಡಿದೆ ಎಂದು ಶೇರುಪೇಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. |