ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಕಚೇರಿಯ ಮೂಲಗಳು ತಿಳಿಸಿವೆ.
ಕಳೆದ 2007ರಲ್ಲಿ ಜಾಗತಿಕ ನಿರುದ್ಯೋಗಿಗಳ ಸಂಖ್ಯೆ18 ಮಿಲಿಯನ್‌ಗಳಾಗಿದ್ದು,2009ರ ವೇಳೆಗೆ ನಿರುದ್ಯೋಗಿಗಳ ಸಂಖ್ಯೆ 30 ಮಿಲಿಯನ್‌ಗಳಿಗೆ ತಲುಪಿದೆ. 50 ಮಿಲಿಯನ್ ಉದ್ಯೋಗಿಗಳು ತ್ರೀಶಂಕು ಸ್ಥಿತಿಯಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಕಚೇರಿ ವಾರ್ಷಿಕ ಗ್ಲೋಬಲ್ ಎಂಪ್ಲಾಯಿಮೆಂಟ್ ಟ್ರೆಂಡ್ಸ್ ರಿಪೋರ್ಟ್‌ನಲ್ಲಿ ಬಹಿರಂಗಪಡಿಸಿದೆ.
ಉದ್ಯೋಗ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳಾಗುತ್ತಿದ್ದು, ಬಹುತೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರಿದಲ್ಲಿ ಸುಮಾರು 200 ಮಿಲಿಯನ್ ಉದ್ಯೋಗಿಗಳು ಬಡತನದರೇಖೆಗಿಂತ ಕೆಳಗಿಳಿಯಲಿದ್ದಾರೆ ಎಂದು ಪ್ರಕಟಿಸಿದೆ.
ಐಎಲ್‌ಒ ಸಂದೇಶ ವಾಸ್ತವತೆಗೆ ಹತ್ತಿರವಾಗಿದ್ದು, ಎಚ್ಚರಿಕೆಯ ಗಂಟೆಯಲ್ಲ. ನಾವು ಸಧ್ಯದ ಸ್ಥಿತಿಯಲ್ಲಿ ಜಾಗತಿಕ ಉದ್ಯೋಗ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಅನೇಕ ದೇಶಗಳ ಸರಕಾರಗಳು ಆರ್ಥಿಕ ಬಿಕ್ಕಟ್ಟು ತಡೆಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ನಿರ್ಧಾರಾತ್ಮಕ ಹಾಗೂ ಅಂತಾರಾಷ್ಟ್ರೀಯ ಸಹಕಾರದೊಂದಿಗೆ ಸಾಮಾಜಿಕ ಕುಸಿತವನ್ನು ತಡೆಯುವುದು ಅಗತ್ಯವಾಗಿದೆ ಎಂದು ಐಎಲ್‌ಒ ನಿರ್ದೇಶಕ ಜನರಲ್ ಜುವಾನ್ ಸೊಮಾವಿಯಾ ಜಿನಿವಾದಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |