ಜನೆವರಿ 17 ಕ್ಕೆ ವಾರಂತ್ಯಗೊಂಡಂತೆ ಸತತ ಎರಡನೇ ವಾರವು ಕೂಡಾ ಹಣದುಬ್ಬರ ಶೇ.5.64 ರಷ್ಟು ಏರಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ಅಧಿಕೃತವಾಗಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.ಕಳೆದ ವರ್ಷ ಜನೆವರಿ 17ಕ್ಕೆ ಅಂತ್ಯಗೊಂಡಂತೆ ಶೇ. 4.45ರಷ್ಟಿದ್ದ ಹಣದುಬ್ಬರ ದರ, ಪ್ರಸಕ್ತ ವರ್ಷದ ಜನೆವರಿ 17ಕ್ಕೆ ವಾರಂತ್ಯಗೊಂತೆ ಶೇ.5.64ಕ್ಕೆ ಏರಿಕೆಯಾಗಿದೆ.ಅಗತ್ಯ ವಸ್ತುಗಳ ಸಗಟು ಸೂಚ್ಯಂಕ ದರ ಹಿಂದಿನ ವಾರದಲ್ಲಿ 230.0 ರಷ್ಟಿದ್ದು, ಪ್ರಸಕ್ತ ವಾರದಲ್ಲಿ ಸೇ.0.2 ರಷ್ಟು ಹೆಚ್ಚಳವಾಗಿ 230.5ಕ್ಕೆ ತಲುಪಿದೆ. ಪ್ರಾಥಮಿಕ ವಸ್ತುಗಳ ಸೂಚ್ಯಂಕ ದರ ಕಳೆದ ವಾರ ಶೇ.249.3 ರಷ್ಟಿದ್ದು, ಪ್ರಸಕ್ತ ವಾರದಲ್ಲಿ ಶೇ.0.1 ರಷ್ಟು ಕುಸಿತವಾಗಿ 249.1ಕ್ಕೆ ತಲುಪಿದೆ. ಭತ್ತ, ಬಾಜ್ರಾ, ಜೋಳ ಮತ್ತು ಮೈದಾ ದರಗಳಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಅಹಾರಧಾನ್ಯಗಳ ಸೂಚ್ಯಂಕ ದರ ಕಳೆದ ವಾರಕ್ಕೆ ಹೋಲಿಸಿದಲ್ಲಿ ಶೇ.0.1 ರಷ್ಟು ಏರಿಕೆ ಕಂಡಿದೆ. ವೈಮಾನಿಕ ಇಂಧನ ಹಾಗೂ ಫರ್ನೆಸ್ ಆಯಿಲ್ ದರಗಳಲ್ಲಿ ಹೆಚ್ಚಳವಾಗಿದ್ದರಿಂದ ಇಂಧನ, ವಿದ್ಯುತ್ ಲ್ಯೂಬ್ರಿಕೆಂಟ್ಸ್ ಸೂಚ್ಯಂಕ ದರಗಳಲ್ಲಿ ಶೇ.0.1 ರಷ್ಟು ಏರಿಕೆಯಾಗಿದೆಹಣ್ಣು ಮತ್ತು ತರಕಾರಿ ಸೂಚ್ಯಂಕಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಸಿಮೆಂಟ್ ಮತ್ತು ಕಬ್ಬಿಣ ದರಗಳಲ್ಲಿ ಅಲ್ಪಮಟ್ಟಿಗೆ ಇಳಿಕೆಯಾಗಿವೆ.ಸತತ ಹತ್ತು ವಾರಗಳ ಇಳಿಕೆ ಕಂಡ ಹಣದುಬ್ಬರ ದರ, ಜನೆವರಿ 10ಕ್ಕೆ ವಾರಂತ್ಯಗೊಂಡಂತೆ ಶೇ.5.6ಕ್ಕೆ ಏರಿಕೆ ಕಂಡಿತ್ತು. ಮತ್ತೆ ಜನೆವರಿ 17 ಕ್ಕೆ ವಾರಂತ್ಯಗೊಂಡಂತೆ ಶೇ.5.64ಕ್ಕೆ ಏರಿಕೆಯಾಗಿದೆ. |