ದೇಶದ ಬೃಹತ್ ಕಾರು ತಯಾರಿಕೆ ಸಂಸ್ಥೆಯಾದ ಮಾರುತಿ ಸುಝುಕಿ ಇಂಡಿಯಾ, ಮೂರನೇ ತ್ರೈಮಾಸಿಕ ಲಾಭಾಂಶದಲ್ಲಿ ಶೇ.54.3 ರಷ್ಟು ಕುಸಿತ ಕಂಡಿದೆ. ಕಚ್ಚಾ ವಸ್ತುಗಳ ದರ ಏರಿಕೆ, ಜಾಗತಿಕ ಆರ್ಥಿಕ ಕುಸಿತದಿಂದಾಗಿ ಗ್ರಾಹಕರ ಬೇಡಿಕೆ ಕುಸಿತ ಮತ್ತು ರೂಪಾಯಿ ಮೌಲ್ಯದ ಏರಿಳಿಕೆಯಿಂದಾಗಿ ತ್ರೈಮಾಸಿಕ ಲಾಭಾಂಶದಲ್ಲಿ ಕುಸಿತವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.ಕಳೆದ ವರ್ಷದ ಡಿಸೆಂಬರ್ ತಿಂಗಳು ಮೂರನೇ ತೈಮಾಸಿಕ ಅವಧಿಯಲ್ಲಿ 2.48 ಬಿಲಿಯನ್ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು, ಪ್ರಸಕ್ತ ವರ್ಷದ ಡಿಸೆಂಬರ್ ತಿಂಗಳಾಂತ್ಯಕ್ಕೆ ಮಾರಾಟದಲ್ಲಿ ಶೇ.54.3 ರಷ್ಟು ಕುಸಿತವಾಗಿ ನಿವ್ವಳ ಲಾಭಂಶ 2.14 ಬಿಲಿಯನ್ ರೂಪಾಯಿಗಳಿಗೆ ಕುಸಿದಿದೆ. ಜಪಾನ್ನ ಸುಝುಕಿ ಮೋಟಾರ್ ಕಾರ್ಪೋರೇಶನ್ ಮಾರುತಿ ಕಂಪೆನಿಯಲ್ಲಿ ಶೇ.54.2 ರಷ್ಟು ಶೇರುಗಳನ್ನು ಹೊಂದಿದ್ದು, ದೇಶದ ವಾಹನೋದ್ಯಮದಲ್ಲಿ ಅಲ್ಟೋ, ಸ್ವಿಫ್ಟ್ ಕಾರುಗಳ ಮಾರಾಟದಿಂದಾಗಿ ಮಾರುತಿ ಸುಝುಕಿ ಕಂಪೆನಿ ಪ್ರಖ್ಯಾತಿ ಪಡೆದಿದೆ. |