ಕೇಂದ್ರ ಸರಕಾರ ಘೋಷಿಸಿದ ಎರಡು ಉತ್ತೇಜನ ಪ್ಯಾಕೇಜ್‌ಗಳು ಪರಿಣಾಮ ಬೀರಲು ಆರಂಭಿಸಿದ್ದು, ದೇಶದ ಆರ್ಥಿಕ ಅಭಿವೃದ್ಧಿ ದರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.7ರ ಗಡಿಯನ್ನು ತಲುಪುವ ವಿಶ್ವಾಸವಿದೆ ಎಂದು ವಿತ್ತ ಖಾತೆಯನ್ನು ಹೊಂದಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಸರಕಾರ ಘೋಷಿಸಿದ ಎರಡು ಉತ್ತೇಜನ ಪ್ಯಾಕೇಜ್‌ಗಳು ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಪ್ರಬಾವ ಬೀರಲು ಆರಂಭಿಸಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂರನೇ ತ್ರೈಮಾಸಿಕ ಸಾಲದ ನೀತಿ ಪರಿಶೀಲನಾ ಸಂದರ್ಭದಲ್ಲಿ ಆರ್ಥಿಕ ಅಭಿವೃದ್ಧಿ ದರ ಪರಿಣಾಮ ಬೀರುತ್ತಿರುವುದು ಖಚಿತಪಡಿಸಿದೆ ಎಂದು ಮುಖರ್ಜಿ ತಿಳಿಸಿದ್ದಾರೆ.
ವಿತ್ತ ಖಾತೆಯನ್ನು ವಹಿಸಿಕೊಂಡಿದ್ದ ಪ್ರಧಾನಿಯವರು ಹೃದಯ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರಿಗೆ ಹೆಚ್ಚುವರಿಯಾಗಿ ವಿತ್ತ ಖಾತೆಯನ್ನು ನೀಡಲಾಗಿದೆ.
ಸಚಿವ ಪ್ರಣಬ್ ಮುಖರ್ಜಿ ಸಂಸತ್ತಿನಲ್ಲಿ ಫೆಬ್ರವರಿ 16 ರಂದು ಮಧ್ಯಂತರ ಬಜೆಟ್ ಮಂಡಿಸಲಿರುವುದರಿಂದ ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಗಳು ಬಜೆಟ್ ವಿವರಣೆಯನ್ನು ನೀಡಿದರು ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. |