ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿದ್ದಂತೆ ಪ್ರಸಕ್ತ ವರ್ಷದಲ್ಲಿ ಕೂಡಾ ಶೇ. 7 ರಿಂದ ಶೇ.7.5 ರಷ್ಟು ಆರ್ಥಿಕ ಅಭಿವೃದ್ಧಿ ದರವನ್ನು ತಲುಪುವ ವಿಶ್ವಾಸವಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.ಮುಂಬರುವ ಆರ್ಥಿಕ ವರ್ಷದಲ್ಲಿ ಶೇ.7 ರಿಂದ ಶೇ.7.5 ರಷ್ಟು ಆರ್ಥಿಕ ಅಭಿವೃದ್ಧಿ ದರವನ್ನು ತಲುಪುವ ನಿರೀಕ್ಷೆಯಿದೆ ಎಂದು ಸಚಿವ ಕಮಲ್‌ನಾಥ್ ವರ್ಲ್ಡ್ ಎಕಾನಾಮಿಕ್ ಫೋರಂ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಆರು ತಿಂಗಳಲ್ಲಿ ಜಿಡಿಪಿ ದರ ಶೇ.7.8 ರಷ್ಟಾಗಲಿದ್ದು, ಉತ್ತೇಜನ ಪ್ಯಾಕೇಜ್‌ಗಳು ಘೋಷಿಸಿದ್ದರೂ ಮುಂದಿನ ಆರು ತಿಂಗಳುಗಳಲ್ಲಿ ಆರ್ಥಿಕತೆ ನಿಧಾನಗತಿಯನ್ನು ಕಾಣಲಿದೆ ಎಂದು ಹೇಳಿದ್ದಾರೆ. ವರ್ಲ್ಡ್ ಎಕಾನಾಮಿಕ್ ಫೋರಂನಲ್ಲಿ ಮಾತನಾಡಿದ ಚೀನಾದ ಪ್ರಧಾನಿ ವೆನ್ ಜಿಯಾಬೊ ಮಾತನಾಡಿ, ಜಾಗತಿಕ ಆರ್ಥಿಕ ಕುಸಿತ ವಹಿವಾಟಿನ ಮೇಲೆ ಭಾರಿ ಪ್ರಮಾಣದ ಪ್ರಭಾವ ಬೀರಿದ್ದು, ಕಳೆದ 2008ರಲ್ಲಿ ಜಿಡಿಪಿ ದರ ಶೇ. 9ರಷ್ಟಾಗಿದ್ದು, 2009ರಲ್ಲಿ ಶೇ.8ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. |