ದೇಶಿಯ ಶೇರುಪೇಟೆ ಕುಸಿತದಿಂದಾಗಿ ಬಂಡವಾಳ ಹೊರಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಬ್ಯಾಂಕ್ ಹಾಗೂ ರಫ್ತು ವಹಿವಾಟುದಾರರಿಂದ ಡಾಲರ್‌ಗಳ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 15 ಪೈಸೆ ಕುಸಿತಗೊಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 49.12 ರೂ.ಗಳಿಗೆ ತಲುಪಿತ್ತು. ಇಂದು ಆರಂಭಿಕ ವಹಿವಾಟಿನಲ್ಲಿ ಮತ್ತೆ 15 ಪೈಸೆ ಕುಸಿತವಾಗಿ 48.97/98 ರೂ.ಗಳಿಗೆ ತಲುಪಿದೆ.ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.ದೇಶಿಯ ಶೇರುಪೇಟೆ ಕುಸಿತದಿಂದಾಗಿ ಬಂಡವಾಳ ಹೊರಹರಿವಿನಿಂದಾಗಿ ದೇಶಿಯ ಕರೆನ್ಸಿ ಮೇಲೆ ಹೆಚ್ಚಿನ ಒತ್ತಡ ಎದುರಾಗಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ. |