ಸತ್ಯಂ ಮಾಜಿ ಮುಖ್ಯಸ್ಥ ಬಿ.ರಾಮಾರಾಜು ಅವರನ್ನು ಹೇಳಿಕೆಗಳನ್ನು ದಾಖಲಿಸಲು ಅವಕಾಶ ನೀಡುವಂತೆ ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ ಸಲ್ಲಿಸಿದ ಅರ್ಜಿಯನ್ನು ಸ್ಛಳೀಯ ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಇಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಿದೆ.
ಸತ್ಯಂ ಕಂಪ್ಯೂಟರ್ಸ್ ಕಂಪೆನಿಯಲ್ಲಿ ಸುಮಾರು 70 ಬಿಲಿಯನ್ ಡಾಲರ್‌ಗಳ ವಂಚನೆ ನಡೆಸಿದ ಆರೋಪವನ್ನು ಹೊತ್ತಿರುವ ರಾಮಲಿಂಗಾರಾಜು ಹಾಗೂ ಸಹೋದರ ರಾಮಾರಾಜು ಅವರನ್ನು ಪ್ರಶ್ನಿಸಲು ಸೆಬಿ ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ ನಂತರ ಹೈಕೋರ್ಟ್‌ಗೆ ಸೆಬಿ ಮನವಿ ಸಲ್ಲಿಸಿದೆ.
ನ್ಯಾಯಾಲಯದ ಎದುರು ವಾದ ನಡೆಸಿದ ಸೆಬಿ ಪರ ವಕೀಲ, "ಸೆಬಿ" ಸರಕಾರದಿಂದ ಮಾನ್ಯತ ಪಡೆದ ಸಂಸ್ಥೆಯಾಗಿದ್ದು, ಸಾವಿರಾರು ಹೂಡಿಕಾದರರ ಹಿತಾಸಕ್ತಿಗಾಗಿ ಹಣವನ್ನು ವಂಚಿಸಿದ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲು, ತನಿಖೆ ನಡೆಸಲು ಕಾನೂನುಬದ್ಧ ಅಧಿಕಾರವಿದೆ ಎಂದು ವಾದಿಸಿತು. |