ಮದುವೆ ಸೀಸನ್ ಆರಂಭವಾದ ಹಿನ್ನೆಲೆಯಲ್ಲಿ ಗ್ರಾಹಕರು ಚಿನ್ನದ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿರುವುದರಿಂದ ಚಿನ್ನದ ದರ ದಾಖಲೆಯ 10 ಗ್ರಾಂ ಗೆ 14,407 ರೂಪಾಯಿಗಳ ಏರಿಕೆ ಕಂಡಿದೆ. ಚಿನ್ನದ ಬೇಡಿಕೆಯಲ್ಲಿ ಹೆಚ್ಚಳವಾಗಿಲ್ಲ. ಆದರೆ ಗ್ರಾಹಕರು ಚಿನ್ನದ ಹಳೆಯ ಆಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮುಂಬೈನ ಚಿನಿವಾರ ಪೇಟೆಯ ಪ್ರಥ್ವಿರಾಜ್ ಕೊಠಾರಿ ಹೇಳಿದ್ದಾರೆ.ಬಹು ಉಪಯುಕ್ತ ವಸ್ತುವಿನ ಪಟ್ಟಿಯಲ್ಲಿ ಚಿನ್ನದ ಪ್ರಭಾವ ಮುಂದುವರಿದಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 14,407 ರೂಪಾಯಿಗಳಿಗೆ ತಲುಪಿದೆ.ಚಿನ್ನದ ಬೇಡಿಕೆ ಕುಸಿತ ಹಾಗೂ ಹೂಡಿಕೆದಾರರ ಲಾಭಗಳಿಕೆಯ ನಿರೀಕ್ಷೆಯಲ್ಲಿ ಸ್ಥಳೀಯ ಚಿನ್ನ ಹಾಗೂ ಬ್ಯಾಂಕ್ ಚಿನ್ನದ ನಡುವಿನ ಅಂತರ ಹೆಚ್ಚಳವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.ಚಿನ್ನದ ದರ ಚಿನಿವಾರಪೇಟೆಯಲ್ಲಿ ದಾಖಲೆಯ ಏರಿಕೆ ಕಂಡಿದ್ದರಿಂದ, ಗ್ರಾಹಕರು ಹಳೆಯ ಚಿನ್ನವನ್ನು ಮಾರಾಟ ಮಾಡಿ ಹೆಚ್ಚಿನ ದರವನ್ನು ಪಡೆಯಲು ಸಹಕಾರಿಯಾಗುತ್ತಿದೆ ಎಂದು ವಹಿವಾಟುದಾರರು ತಿಳಿಸಿದ್ದಾರೆ.ಚಿನ್ನವನ್ನು ಖರೀದಿಸ ಬಯಸುವ ಗ್ರಾಹಕರು ಚಿನ್ನದ ದರ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಅಹ್ಮದಾಬಾದ್ನ ಝವೇರಿ ಆಂಡ್ ಕಂಪೆನಿಯ ನಿರ್ದೇಶಕ ಕಿಶೋರ್ ಝವೇರಿ ತಿಳಿಸಿದ್ದಾರೆ |