ಸತ್ಯಂ ಸಂಸ್ಥಾಪಕ ಬಿ.ರಾಮಲಿಂಗಾರಾಜು ಹಾಗೂ ಸಹೋದರ ರಾಮರಾಜು ಅವರ ಹೇಳಿಕೆಗಳನ್ನು ದಾಖಲಿಸಲು ಅನುಮತಿ ನೀಡುವಂತೆ ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ ಮನವಿ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 6 ಕ್ಕೆ ಮುಂದೂಡಿದೆ.
ಸೆಬಿ ಸಲ್ಲಿಸಿದ ಅರ್ಜಿಯ ಕುರಿತಂತೆ ನ್ಯಾಯಾಲಯ ಬಿ.ರಾಮಲಿಂಗಾರಾಜು ಹಾಗೂ ಸಹೋದರ ರಾಮರಾಜು ಹಾಗೂ ಚಂಚಲ್‌ಗುಡಾ ಕಾರಾಗ್ರಹದ ಮುಖ್ಯ ಅಧೀಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದು, ಫೆಬ್ರವರಿ 9 ರೊಳಗೆ ಉತ್ತರಿಸುವಂತೆ ತಾಕೀತು ಮಾಡಿದೆ.
ರಾಜು ವಿಚಾರಣೆಗಾಗಿ ಮಧ್ಯಂತರ ಆದೇಶವನ್ನು ನೀಡುವಂತೆ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಸೆಬಿ ಪರವಾಗಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಜಿ.ವಾಹನವತಿ ತಿಳಿಸಿದ್ದಾರೆ.
ಬಿ.ರಾಮಲಿಂಗಾರಾಜು ಹಾಗೂ ಸಹೋದರ ರಾಮರಾಜು ಹಾಗೂ ಚಂಚಲ್‌ಗುಡಾ ಕಾರಾಗ್ರಹದ ಮುಖ್ಯ ಅಧೀಕ್ಷಕರ ವಿಚಾರಣೆ ನಡೆಸದೆ ಮಧ್ಯಂತರ ಆದೇಶವನ್ನು ಜಾರಿಗೊಳಿಸಲು ಸಾಧ್ಯವಿಲ್ಲವೆಂದು ನ್ಯಾಯಾಧೀಶರು ಹೇಳಿದ್ದಾರೆಂದು ವಾಹನವತಿ ತಿಳಿಸಿದ್ದಾರೆ. |