ಗ್ರಾಹಕರ ಬೇಡಿಕೆ ಕುಸಿತ ಹಾಗೂ ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ ವಾಹನೋದ್ಯಮ ಸಂಸ್ಥೆ ಟಾಟಾ ಮೋಟಾರ್ಸ್, ಡಿಸೆಂಬರ್‌ಗೆ ಅಂತ್ಯಗೊಂಡಂತೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ 263.26 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಬಹುನಿರೀಕ್ಷಿತ ನ್ಯಾನೊ ಕಾರು ಗುಜರಾತ್‌ನ ಸನಂದ್ ಘಟಕದಿಂದ ಹೊರಬರಲು ಕನಿಷ್ಟ ಒಂದು ವರ್ಷಗಳ ಕಾಲಾವಕಾಶ ಅಗತ್ಯವಾಗಿದೆ ಎಂದು ಟಾಟಾ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ರವಿಕಾಂತ್ ಹೇಳಿದ್ದಾರೆ. ವಾಹನಗಳ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ನಷ್ಟವನ್ನು ಭರಿಸಲು ಹುದ್ದೆಗಳನ್ನು ಕಡಿತ ಮಾಡಿದ್ದು, ಮತ್ತಷ್ಟು ಹುದ್ದೆಗಳನ್ನು ಕಡಿತ ಮಾಡುವ ಸಾಧ್ಯತೆಗಳಿವೆ ಎಂದು ರವಿಕಾಂತ್ ತಿಳಿಸಿದ್ದಾರೆ.ಮುಂಬರುವ ಮೂರು ವರ್ಷಗಳಲ್ಲಿ 1 ಸಾವಿರ ಕೋಟಿ ರೂ.ಗಳ ವೆಚ್ಚ ಕಡಿತದ ಗುರಿಯನ್ನು ಹೊಂದಿದ್ದೇವೆ. ಕಳೆದ ವರ್ಷ ಘೋಷಿಸಲಾದ ಘಟಕಗಳ ಗಾತ್ರ ವಿಸ್ತರಣೆ ಮತ್ತು ಆಧುನಿಕರಣ ಕುರಿತ ಯೋಜನೆಗಳನ್ನು ಮರುಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್‌ನ ಮುಖ್ಯ ಆರ್ಥಿಕ ಅಧಿಕಾರಿ ರಾಮಕೃಷ್ಣ ಹೇಳಿದ್ದಾರೆ.ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 7,251.83 ಕೋಟಿ ರೂ.ಗಳಾಗಿದ್ದ ಒಟ್ಟು ಆದಾಯ, ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ 4,758.62 ಕೋಟಿ ರೂ.ಗಳಿಗೆ ಇಳಿಕೆಯಾಗಿ ಶೇ.34.38 ರಷ್ಟು ಕುಸಿತ ಕಂಡಿದೆ ಎಂದು ಟಾಟಾ ಮೋಟಾರ್ಸ್ ಮುಂಬೈ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ. |