ಭಾರತೀಯ ತಲಾ ವಾರ್ಷಿಕ ಆದಾಯ 33,283 ರೂಪಾಯಿಗಳಿಗೆ ಏರಿಕೆಯಾಗಿದ್ದು ಸರಾಸರಿ ಕಳೆದ ಏಳು ವರ್ಷದಲ್ಲಿ ದ್ವಿಗುಣವಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.ಕಲೆದ 2001ರಲ್ಲಿ ಭಾರತೀಯನ ತಲಾ ವಾರ್ಷಿಕ ಆದಾಯ 16,688 ರೂಪಾಯಿಗಳಾಗಿದ್ದು, 2007-08ರಲ್ಲಿ 33,283 ರೂಪಾಯಿಗಳಿಗೆ ಏರಿಕೆಯಾಗಿ ದ್ವಿಗುಣವಾಗಿದೆ ಎಂದು ಕೇಂದ್ರ ಅಂಕಿ ಅಂಶ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಪ್ರಕಟಿಸಿದೆ.ಭಾರತೀಯರ ತಲಾ ಆದಾಯ ಹೆಚ್ಚುತ್ತಿರುವುದು ದೇಶದ ಆರ್ಥಿಕತೆ ವೇಗವಾಗಿ ಸಾಗುತ್ತಿದೆ ಎನ್ನುವ ಸಂಕೇತವಾಗಿದ್ದು, ಕಳೆದ ಐದು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿ ದರ ನಿರಂತರ ಏರಿಕೆಯತ್ತ ಸಾಗುತ್ತಿದೆ ಎಂದು ತಿಳಿಸಿದೆ.2005-06 ರ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.9.5ಕ್ಕೆ ತಲುಪಿತ್ತು.ನಂತರ 2006-07ರ ಆರ್ಥಿಕ ಸಾಲಿನಲ್ಲಿ ಶೇ.9.7ಕ್ಕೆ ಏರಿಕೆಯಾಗಿತ್ತು. ಆದರೆ ಜಾಗತಿಕ ಆರ್ಥಿಕ ಕುಸಿತದ ಪರಿಣಾಮವಾಗಿ 2008-09 ರ ಸಾಲಿನಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7.5 ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದೆ. |