ಜಾಗತಿಕ ಆರ್ಥಿಕ ಕುಸಿತದ ಚಂಡುಮಾರುತ ಆಳವಾಗಿ ಮುಂದುವರಿಯುತ್ತಿದ್ದು, ಆರ್ಥಿಕ ಕುಸಿತವನ್ನು ತಡೆಯಲು ಅಮೆರಿಕದ ಉದ್ಯೋಗಿಗಳು ಹಾಗೂ ಸಂಸತ್ ಸದಸ್ಯರು ಕೂಡಲೇ ತಾವು ಉದ್ದೇಶಿಸಿದ ಉತ್ತೇಜನ ಪ್ಯಾಕೇಜ್‌ಗೆ ಬೆಂಬಲ ನೀಡುವಂತೆ ಎಚ್ಚರಿಸಿದ್ದಾರೆ ದೇಶದಲ್ಲಿ ಮಿಲಿಯನ್‌ಗಟ್ಟಲೆ ಹುದ್ದೆಗಳು ಸೇರಿದಂತೆ ಹಲವು ಕ್ಷೇತ್ರಗಳು ಭಾರಿ ಪ್ರಮಾಣದ ಆರ್ಥಿಕ ಕುಸಿತಕ್ಕೆ ಒಳಗಾಗಿದ್ದು, ಅಮೆರಿಕದ ಜನತೆಯ ಕನಸು ತಿರುವು ಮುರುವಾಗಿದೆ ಎಂದು ಅಧ್ಯಕ್ಷ ಒಬಾಮಾ ಹೇಳಿದ್ದಾರೆ.ಜಾಗತಿಕ ಆರ್ಥಿಕ ಕುಸಿತ ಸಧ್ಯದ ಸಮಸ್ಯೆಯಲ್ಲ. ಆರ್ಥಿಕ ಕುಸಿತವನ್ನು ಶೀಘ್ರದಲ್ಲಿ ನಿಯಂತ್ರಣಕ್ಕೆ ತರದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಕಾರ್ಯನಿರ್ವಹಿಸುವ ಕುಟುಂಬಗಳಿಗೆ, ನಿರಂತರ ಆರ್ಥಿಕ ಚಂಡುಮಾರುತವಾಗಲಿದೆ ಎಂದು ಒಬಾಮಾ ಅಭಿಪ್ರಾಯಪಟ್ಟಿದ್ದಾರೆ ಸರಕಾರದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ 2008ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಶೇ.3.8 ರಷ್ಟು ಕುಸಿತ ಕಂಡಿದೆ. ಇದು 1982 ರ ನಂತರ ಮೊದಲ ಬಾರಿಗೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.ಅಮೆರಿಕದಲ್ಲಿ ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಆಳವಾಗುತ್ತಿದೆ. ಹಣಕಾಸಿನ ಅಗತ್ಯತೆಯಲ್ಲಿ ಏರಿಕೆಯಾಗುತ್ತಿದೆ.ಸಂಸತ್ತು ಕೂಡಲೇ ಉತ್ತೇಜನ ಪ್ಯಾಕೇಜ್‌ಗೆ ಅನುಮೋದನೆ ನೀಡಿದಲ್ಲಿ ಆರ್ಥಿಕ ಸುಧಾರಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಒಬಾಮಾ ಜನಪ್ರತಿನಿಧಿಗಳ ಬೆಂಬಲ ಕೋರಿದ್ದಾರೆ.ಆರ್ಥಿಕ ಕುಸಿತ ತಡೆಗೆ ವಿಳಂಬ ನೀತಿಯನ್ನು ಅನುಸರಿಸುವುದು ಸರಿಯಲ್ಲ. ಅಮೆರಿಕದ ಜನತೆ ನಮ್ಮಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷನಾಗಿ ಜನತೆಯ ಆಶೋತ್ತರಗಳನ್ನು ಈಡೇರಿಸಬೇಕಾಗಿದೆ ಎಂದು ಬರಾಕ್ ಒಬಾಮಾ ಹೇಳಿದ್ದಾರೆ. |