ದೇಶದ ಪ್ರಮುಖ ಇಂಜಿನಿಯರಿಂಗ್ ದೈತ್ಯ ಸಂಸ್ಥೆಯಾದ ಲಾರ್ಸನ್ ಆಂಡ್ ಟೌಬ್ರೋ ಮೂರನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, 1520 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಶೇ.25 ರಿಂದ ಶೇ.30 ರಷ್ಟು ಅಭಿವೃದ್ಧಿಯ ಗುರಿಯನ್ನು ಹೊಂದಲಾಗಿದೆ. ಶೇ.15ರಿಂದ ಶೇ. 20 ರಷ್ಟು ಗುರಿಯನ್ನು ತಲುಪಿದರೂ ನಮಗೆ ಸಂತೋಶವಾಗುತ್ತದೆ ಎಂದು ಎಲ್ ಆಂಡ್ ಟಿ ಉಪಾಧ್ಯಕ್ಷ (ಹಣಕಾಸು)ಆರ್.ಶಂಕರ್ ರಾಮನ್ ತಿಳಿಸಿದ್ದಾರೆ.
ಕಳೆದ ವರ್ಷದ ಆರ್ಥಿಕ ಸಾಲಿನ ಡಿಸೆಂಬರ್ ತಿಂಗಳಲ್ಲಿ 482 ಕೋಟಿ ರೂಪಾಯಿ ಒಟ್ಟು ಆದಾಯವಾಗಿದ್ದು, ಪ್ರಸಕ್ತ ವರ್ಷದಲ್ಲಿ 1,520 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. |