ಮುಂಬೈ : ದೇಶದ ನಂಬರ್ ಒನ್ ಸ್ಥಾನದಲ್ಲಿರುವ ಸಾರ್ವಜನಿಕ ಕ್ಷೇತ್ರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಒಂದು ವರ್ಷದ ಅವಧಿಯವರೆಗೆ ಶೇ.8 ಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿದೆ.
ಪ್ರಸ್ತುತ ಗೃಹ ಸಾಲ ಪಡೆದಿರುವ ಗ್ರಾಹಕರಿಗೆ ಎಸ್‌ಬಿಐ ಲೈಫ್‌ಸ್ಟೈಲ್ ಲೋನ್ ಎನ್ನುವ ಯೋಜನೆಯಡಿ ಒಂದು ವರ್ಷದ ಅವಧಿಯವರೆಗೆ ಶೇ.8 ರಷ್ಟು ಬಡ್ಡಿ ದರದ ಸೌಲಭ್ಯವನ್ನು ಪಡೆಯಬಹುದಾಗಿದೆ.
ಗ್ರಾಹಕರು 5 ಲಕ್ಷದೊಳಗೆ ಗೃಹ ಸಾಲಪಡೆದಿದ್ದಲ್ಲಿ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಯೋಜನೆಯಡಿ ಫೆಬ್ರವರಿ 2 ರಿಂದ ಏಪ್ರಿಲ್ 30 ರವರೆಗೆ ಗೃಹ ಸಾಲ ಪಡೆದ ಗ್ರಾಹಕರಿಗೆ ಶೇ. 8 ರಷ್ಟು ಬಡ್ಡಿದರ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
5 ಲಕ್ಷ ರೂಪಾಯಿಗಳವರೆಗೆ ಹಾಗೂ 5-20 ಲಕ್ಷ ರೂಪಾಯಿಗಳವರೆಗಿನ ಪ್ರಸ್ತುತವಿರುವ ಎರಡು ಗೃಹ ಸಾಲ ಯೋಜನೆಗಳಡಿ ಸಾಲ ಪಡೆದ ಗ್ರಾಹಕರು ಕೂಡಾ ಶೇ.8 ರಷ್ಟು ಬಡ್ಡಿ ದರ ಸೌಲಭ್ಯವನ್ನು ಒಂದು ವರ್ಷದ ಅವಧಿಯವರೆಗೆ ಪಡೆಯಬಹುದಾಗಿದೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. |