ದಾವೋಸ್: ಒಂದು ವೇಳೆ ಯುಪಿಎ ಸರಕಾರ ಮರು ಅಧಿಕಾರಕ್ಕೆ ಬಂದರೆ ಮುಂದಿನ ಬಜೆಟಿನಲ್ಲಿ ಬೃಹತ್ ಪ್ರಮಾಣದ ಆರ್ಥಿಕ ಪ್ಯಾಕೆಜನ್ನು ಘೋಷಿಸಲಾಗುವುದು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ. ಚುನಾವಣೆಯ ಬಳಿಕ ಈ ಸರಕಾರ ನಿಜವಾದ ಬಜೆಟನ್ನು ಮಂಡಿಸಲಿದ್ದು, ಅದು ಯಾವ ರೀತಿಯ ಬಜೆಟ್ ಆಗಬೇಕೆಂಬುದರ ಬಗ್ಗೆ ತಾವು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. |