ಮುಂಬೈ : ಸಾರ್ವಜನಿಕ ಸ್ವಾಮ್ಯದ ಕಾರ್ಪೋರೇಶನ್ ಬ್ಯಾಂಕ್ ಇಂದಿನಿಂದ ಅನ್ವಯವಾಗುವಂತೆ ಠೇವಣಿ ಮತ್ತು ಬಡ್ಡಿ ದರಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.8.5 ರಷ್ಟು ನಿಗದಿಪಡಿಸಲಾಗಿದ್ದು ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.50 ರಷ್ಟು ಕಡಿತಗೊಳಿಸಲಾಗಿದೆ ಎಂದು ಬ್ಯಾಂಕ್‌ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜೆ.ಎಂ.ಗರ್ಗ್ ತಿಳಿಸಿದ್ದಾರೆ. |