ನ್ಯೂಯಾರ್ಕ್ : ಜಾಗತಿಕ ಮೊಬೈಲ್ ತಯಾರಿಕೆ ಸಂಸ್ಥೆಗಳಲ್ಲಿ ನಾಲ್ಕನೇ ಸ್ಥಾನಪಡೆದಿರುವ ಮೊಟೊರೊಲಾ ನಾಲ್ಕನೇ ತ್ರೈಮಾಸಿಕ ಲಾಭಾಂಶದಲ್ಲಿ ಕುಸಿತ ಕಂಡಿದೆ. 2008ರ ಡಿಸೆಂಬರ್ 31 ಕ್ಕೆ ಅಂತ್ಯಗೊಂಡಂತೆ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 3.6 ಬಿಲಿಯನ್ ಡಾಲರ್‌ಗಳ ನಷ್ಟ ಅನುಭವಿಸಿದೆ. ಕಲೆದ ವರ್ಷದ ಆರ್ಥಿಕ ಸಾಲಿನಲ್ಲಿ 100 ಮಿಲಿಯನ್ ಡಾಲರ್ ನಿವ್ವಳ ಲಾಭ ದಾಖಲಿಸಿತ್ತು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. |