ಹೈದ್ರಾಬಾದ್ : ಸತ್ಯಂ ಕಂಪ್ಯೂಟರ್ ಸಂಸ್ಥೆಯನ್ನು ಖರೀದಿಸಲು ಕಂಪೆನಿಗಳು ತುದಿಗಾಲ ಮೇಲೆ ನಿಂತಿರುವಂತೆ ಇಂದು ಸತ್ಯಂ ಅಡಳಿತ ಮಂಡಳಿ ಸಭೆ ಆರಂಭವಾಗಿದೆ. ಸತ್ಯಂ ಆಡಳಿತ ಮಂಡಳಿಯ ನಿರ್ದೇಶಕರ ಸಭೆ ಎರಡು ದಿನಗಳ ಕಾಲ ನಡೆಯಲಿದ್ದು, ಬಿ.ಕೆ.ಮೋದಿ ನೇತೃತ್ವದ ಸ್ಪೈಸ್ ಕಂಪೆನಿ ಸೇರಿದಂತೆ ಸಭೆಯಲ್ಲಿ ಸತ್ಯಂ ಖರೀದಿಗಾಗಿ ಕಂಪೆನಿಗಳ ದರವನ್ನು ಪರಿಶೀಲಿಸಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |