ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ದರ ಶೇ.5.07ಕ್ಕೆ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ದರ ಶೇ.5.07ಕ್ಕೆ ಇಳಿಕೆ
PTI
ವಾರ್ಷಿಕ ಹಣದುಬ್ಬರ ದರ ಜನೆವರಿ 24ಕ್ಕೆ ವಾರಂತ್ಯಗೊಂಡಂತೆ ಶೇ.5.07ಕ್ಕೆ ಇಳಿಕೆಯಾಗಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಜನೆವರಿ ತಿಂಗಳಿನಲ್ಲಿ ಶೇ.4.78 ರಷ್ಟಿದ್ದ ಹಣದುಬ್ಬರ ದರ ಪ್ರಸಕ್ತ ವರ್ಷದಲ್ಲಿ ಶೇ.5.07ಕ್ಕೆ ತಲುಪಿದೆ.

ಅಗತ್ಯ ವಸ್ತುಗಳ ಸಗಟು ಸೂಚ್ಯಂಕ ದರ 2009ರ ಜನೆವರಿ 24ಕ್ಕೆ ವಾರಂತ್ಯಗೊಂಡಂತೆ ಶೇ.0.2 ರಷ್ಟು ಇಳಿಕೆಯಾಗಿ 230.1 ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಹಾರ ಧಾನ್ಯಗಳ ಸೂಚ್ಯಂಕ ಕಳೆದ ವಾರ 244.9 ರಷ್ಟಿದ್ದು, ಪ್ರಸಕ್ತ ವಾರದಲ್ಲಿ 245.4ಕ್ಕೆ ಹೆಚ್ಚಳವಾಗಿ ಶೇ.0.2 ರಷ್ಟು ಏರಿಕೆ ಕಂಡಿದೆ. ಮೈದಾಶೇ.3 , ಭತ್ತ ಶೇ. 2 ,ರಾಗಿ ಹಾಲು, ದವಸಧಾನ್ಯ ಶೇ.1ರಷ್ಟು, ಹಣ್ಣು ತರಕಾರಿ ಮತ್ತು ಬಾಜ್ರಾ ಶೇ.2ರಷ್ಟು ಕಾಫಿ ಶೇ. 1 ರಷ್ಟು ಇಳಿಕೆಯಾಗಿದೆ.

ಅಹಾರ ಧಾನ್ಯಗಳನ್ನು ಹೊರತುಪಡಿಸಿ ರಬ್ಬರ್ ಶೇ 6 ರಷ್ಟು, ಕೊಪ್ರಾ ಶೇ.5ರಷ್ಟು, ಕೊಬ್ಬರಿ ಎಣ್ಣೆ ಶೇ.3 ರಷ್ಟು ಇಳಿಕೆಯಾಗಿ ಇತರ ವಸ್ತುಗಳ ಸೂಚ್ಯಂಕ ಶೇ.0.7 ರಷ್ಟು ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಇ-ಹರಾಜಿಗೆ ವಿರೋಧ
ಬಜೆಟ್ : ಭಾರತಕ್ಕೆ 13ನೇ ಸ್ಥಾನ
ಫೋರ್ಬ್ಸ್ ಪಟ್ಟಿ ಪ್ರಕಟ
ರೇಟೆಲ್ ಅಂಗಡಿ ಬಂದ್
ನ್ಯಾನೊ ಬುಕ್ಕಿಂಗ್ ಆರಂಭ
ರೂಪಾಯಿ ಮೌಲ್ಯ ಹೆಚ್ಚಳ