ಬಾಲಿವುಡ್ ಜಗತ್ತಿನ ಮಹಾನ್ ಖರೀದಿಯೊಂದರಲ್ಲಿ, ಅನಿಲ್ ಅಂಬಾನಿ ಎಂಟರ್‌ಟೇನ್‌ಮೆಂಟ್ ಕಂಪೆನಿ 'ಬಿಗ್ ಪಿಕ್ಟರ್ಸ್' , ರಾಕೇಶ್ ರೋಶನ್ ನಿರ್ಮಾಣದ ಕೈಟ್ಸ್ ಚಿತ್ರದ ವಿತರಣೆಯ ಹಕ್ಕನ್ನು 110 ಕೋಟಿ ರೂಪಾಯಿಗಳಿಗೆ ಪಡೆದಿದ್ದು, ಇದು ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಧಿಕ ಮೊತ್ತವಾಗಿದೆ ಹಾಗೂ ಸಾಗರೋತ್ತರ ಮಾರುಕಟ್ಟೆಯ ಲಾಭದಲ್ಲಿ ಬಿಗ್ ಪಿಕ್ಚರ್ಸ್ ಪಾಲನ್ನು ಪಡೆಯಲಿದೆ.
ಬಾಲಿವುಡ್ ಚಿತ್ರರಂಗದಲ್ಲಿ ಮಹತ್ತರ ಯೋಜನೆಗಳು ಪ್ರಗತಿಯಲ್ಲಿರುವಂತೆ ಸೂಪರ್‌ಸ್ಟಾರ್ ನಟ ನಟಿಯರು ತಮ್ಮ ದರವನ್ನು ಇಳಿಕೆ ಮಾಡುತ್ತಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ಹೂಡಿಕೆ ಮಾಡಲು ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಸಿದ್ದರಾಗಿದ್ದಾರೆ. ನಿರ್ಮಾಪಕ ರಾಕೇಶ್ ರೋಶನ್ ಮೊತ್ತದ ಕುರಿತಂತೆ ಹೇಳಿಕೆ ನೀಡಲು ಸಿದ್ದವಿಲ್ಲವಾದರೂ ಸುಮಾರು 150 ಕೋಟಿ ರೂಪಾಯಿಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಘಜನಿ ವಿತರಣಾ ಹಕ್ಕಿನ ಮೊತ್ತ 94 ಕೋಟಿ ರೂಪಾಯಿ ಹಾಗೂ ಸಿಂಗ್ ಈಸ್ ಕಿಂಗ್ ಚಿತ್ರದ ವಿತರಣಾ ಹಕ್ಕನ್ನು 65 ಕೋಟಿ ರೂಪಾಯಿಗಳಿಗೆ ನೀಡಲಾಗಿದೆ. ಆದರೆ ಈ ಎರಡು ಚಿತ್ರಗಳ ಒಟ್ಟು ಮೊತ್ತದಷ್ಟು ಹಣವನ್ನು ಕೇವಲ ಒಂದೇ ಚಿತ್ರಕ್ಕೆ ಪಡೆಯುವಲ್ಲಿ ನಿರ್ಮಾಪಕ ರಾಕೇಶ್ ರೋಶನ್ ಯಶಸ್ವಿಯಾಗಿದ್ದಾರೆ.
ಕೈಟ್ ಚಿತ್ರದಲ್ಲಿ ಹೃತಿಕ್, ರೋಷನ್ ಮೆಕ್ಸಿಕನ್ ನಟಿ ಬಾರ್ಬರಾ ಮೊರಿ ಮತ್ತು ಕಂಗನಾ ರನಾವತ್ ನಟಿಸಿದ್ದು, ಖ್ಯಾತ ನಿರ್ಮಾಪಕ ಅನುರಾಗ್ ಬಸು ನಿರ್ದೇಶಿಸಿದ್ದಾರೆ. |