ಮುಂಬೈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥ ಓ.ಪಿ.ಭಟ್ ಅವರಿಗೆ ಏಷ್ಯಾ ಮನಿ ಸಂಸ್ಥೆಯ ಫೈನಾನ್ಶಿಯಲ್ ಮ್ಯಾಗಜಿನ್ 'ಬೆಸ್ಟ್ ಎಕ್ಸಿಕ್ಯೂಟಿವ್ 2008' ಪ್ರಶಸ್ತಿ ನೀಡಿ ಗೌರವಿಸಿದೆ.
ಗ್ರಾಹಕರ ಸ್ಪಂದನೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರಿಂದ ಈ ಪ್ರಶಸ್ತಿ ನೀಡಲಾಗಿದೆ ಎಂದು ಮ್ಯಾಗಜಿನ್ ಮೂಲಗಳು ತಿಳಿಸಿವೆ.
ಭಟ್ ಅವರ ವಹಿವಾಟು ಚಾತುರ್ಯ ಹಾಗೂ ಪ್ರಸಕ್ತ ಆರ್ಥಿಕ ಬಿಕ್ಕಟ್ಟಿನಲ್ಲಿ ಕೂಡಾ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬಂದಿರುವುದಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. |