ನವದೆಹಲಿ : ಮದುವೆ ಋತುವಾಗಿದ್ದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನವನ್ನು ಖರೀದಿಸುವ ನಿರೀಕ್ಷೆಯಲ್ಲಿ ಚಿನ್ನದ ದರದಲ್ಲಿ ಮತ್ತೆ 105 ರೂಪಾಯಿಗಳ ಏರಿಕೆಯಾಗಿ ಪ್ರತಿ 10 ಗ್ರಾಂ ಚಿನ್ನಕ್ಕೆ 14,185 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಕೂಡಾ 100 ರೂಪಾಯಿಗಳ ಏರಿಕೆಯಾಗಿ ಪ್ರತಿ ಕೆ.ಜಿ ಬೆಳ್ಳಿಗೆ 19,500 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ. |