ಮುಂಬೈ : ದೇಶದ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಯಾದ ಕಿಂಗ್‌ಫಿಶರ್ ಏರ್‌ಲೈನ್ಸ್ ಪೈಲಟ್‌ಗಳ ವೇತನದಲ್ಲಿ 80 ಸಾವಿರ ರೂಪಾಯಿಗಳನ್ನು ಕಡಿತ ಮಾಡಿ ಆದೇಶ ಹೊರಡಿಸಿದೆ. ಪೈಲಟ್‌ಗಳಿಗೆ ಮೊದಲು ನೀಡಲಾಗುತ್ತಿದ್ದ 4.30 ಲಕ್ಷ ಮಾಸಿಕ ವೇತನದಲ್ಲಿ 80 ಸಾವಿರ ರೂಪಾಯಿಗಳನ್ನು ಕಡಿತಗೊಳಿಸಿ 3.50ಲಕ್ಷಕ್ಕೆ ಸೀಮಿತಗೊಳಿಸಿದೆ.ಡೆಕ್ಕನ್ ಮತ್ತು ಕಿಂಗ್‌ಫಿಶರ್ ವೀಲಿನಗೊಳಿಸುವ ನೆಪದಲ್ಲಿ ಪೈಲಟ್‌ಗಳ ವೇತನವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಹೆಸರು ಹೇಳಲು ಬಯಸದ ಪೈಲಟ್‌ಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ. |