ನವದೆಹಲಿ : ವಾಹನೋದ್ಯಮ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದಿಂದ ಜಂಟಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಕುರಿತಂತೆ ಭಾರತ ಮತ್ತು ಜರ್ಮನಿ ದೇಶಗಳು ಸಮ್ಮತಿ ಸೂಚಿಸಿವೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಹನೋದ್ಯಮ ಕುಸಿಯವುದನ್ನು ತಡೆಯಲು ಜಂಟಿ ಕಾರ್ಯಕಾರಿ ಗುಂಪುನ್ನು ರಚಿಸಲಾಗಿದೆ ಎಂದು ಔದ್ಯೋಗಿಕ ಹಾಗೂ ಆರ್ಥಿಕ ಸಹಕಾರದ ಇಂಡೋ-ಜರ್ಮನ್ ಜಂಟಿ ಆಯೋಗ ಪ್ರಕಟಿಸಿದೆ. |