ಫ್ರಾಂಕ್‌ಫರ್ಟ್ : ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮರ್ಸಿಡಸ್ ಬೆಂಜ್ ಕಾರು ಮಾರಾಟದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದ ಜನೆವರಿ ತಿಂಗಳ ಮಾರಾಟದಲ್ಲಿ ಶೇ.31 ರಷ್ಟು ಕುಸಿತ ಕಂಡಿದೆ ಎಂದು ಡೈಮ್ಲರ್ ಎಜಿ ಕಂಪೆನಿ ತಿಳಿಸಿದೆ. 2008ರ ಜನೆವರಿ ತಿಂಗಳಲ್ಲಿ 90,400 ಕಾರುಗಳನ್ನು ಮಾರಾಟ ಮಾಡಿದ್ದು,ಪ್ರಸಕ್ತ ವರ್ಷದ ಜನೆವರಿ ತಿಂಗಳಿನಲ್ಲಿ 62 ಸಾವಿರ ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಎಎಂಜಿ ಕಂಪೆನಿ ತಿಳಿಸಿದೆ. |