ಮುಂಬೈ : ದೇಶದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಡಿಎಲ್‌ಎಫ್ ಸಂಸ್ಥೆ, ಆರ್ಥಿಕ ಸಹಾಯವನ್ನು ಪಡೆಯಲು ಅಡ್ಡಿಯಾಗಿರುವ ಕಾರ್ಪೋರೇಟ್ ನೀತಿಗಳಿಂದಾಗಿ ವಾರದ ಅವಧಿಯಲ್ಲಿಯೇ 7 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಶೇರುಪೇಟೆಯಲ್ಲಿ ಡಿಎಲ್‌ಎಫ್ ಶೇರುಗಳ ಮೌಲ್ಯ ಶೇ.22 ರಷ್ಟು ಇಳಿಕೆ ಕಂಡಿದೆ. ಡಿಎಲ್‌ಎಫ್ ಶೇರುಗಳ ಮುಖಬೆಲೆ 138.15 ರೂಪಾಯಿಗಳಿಂದ 124 ರೂ.ಗಳಿಗೆ ಇಳಿಕೆಯಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. |