ಹೈದ್ರಾಬಾದ್ : ಸತ್ಯಂ ಸಂಸ್ಥಾಪಕ ಬಿ.ರಾಮಲಿಂಗಾರಾಜು ಎಸಗಿದ ವಂಚನೆಯ ತನಿಖೆಗಾಗಿ ಆದಾಯ ತೆರಿಗೆ ಇಲಾಖೆ ವಿಶೇಷ ತಂಡವನ್ನು ರಚಿಸಿದೆ ಎಂದು ಆದಾಯ ಇಲಾಖೆ ಮೂಲಗಳು ತಿಳಿಸಿವೆ. ರಾಜು ತನಿಖೆಗಾಗಿ ಫೆಬ್ರವರಿ 3 ರಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಕಳೆದ 2005 ರಿಂದ ಹಣದ ವರ್ಗಾವಣೆ ಮತ್ತು ಭೂಮಿ ಖರೀದಿಯ ವಿವರಗಳನ್ನು ಪಡೆಯುವುದು ತನಿಖೆಯ ಭಾಗವಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. |