ದೇಶದ ಅತೀ ದೊಡ್ಡ ವಾಹನ ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ ಚೇತರಿಕೆಯತ್ತ ಸಾಗುತ್ತಿದ್ದು, ತನ್ನ ಜೆಮ್‌ಶೆಡ್‌ಪುರದ ಕಾರ್ಖಾನೆಗೆ ಸುಮಾರು 1650ರಷ್ಟು ತಾತ್ಕಾಲಿಕ ನೌಕರರನ್ನು ನೇಮಿಸಿದೆ.
ವಾಹನ ಮಾರಾಟದಲ್ಲಿ ಕುಸಿತ ಕಂಡಿದ್ದ ಕಾರಣ ಜೆಮ್‌ಶೆಡ್‌ಪುರದ ಬೃಹತ್ ಗಾತ್ರದ ವಾಣಿಜ್ಯ ವಾಹನಗಳ ತಯಾರಿಕಾ ಘಟಕದಿಂದ 700ರಷ್ಟು ತಾತ್ಕಾಲಿಕ ನೌಕರರನ್ನು ಕಳೆದ ವರ್ಷ ಕೈ ಬಿಡಲಾಗಿತ್ತು.
"ಫೆಬ್ರವರಿ ಆರಂಭದಿಂದ ನಾವು 1650ಕ್ಕಿಂತಲೂ ಹೆಚ್ಚು ತಾತ್ಕಾಲಿಕ ನೌಕರರನ್ನು ನಮ್ಮ ಜೆಮ್‌ಶೆಡ್‌ಪುರದ ಕಾರ್ಖಾನೆಗೆ ಗುತ್ತಿಗೆ ಪಡೆದುಕೊಂಡಿದ್ದೇವೆ" ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಕಂಪೆನಿಯ ಜೆಮ್‌ಶೆಡ್‌ಪುರದ ಕಾರ್ಖಾನೆಯಲ್ಲಿನ ಮೂರು ತಾತ್ಕಾಲಿಕ ವಲಯಗಳನ್ನು ಕಳೆದ ವರ್ಷದ ನವೆಂಬರ್ 5ರಿಂದ 8ರವರೆಗೆ, ನವೆಂಬರ್ 25ರಿಂದ 29ರವರೆಗೆ ಹಾಗೂ ಡಿಸೆಂಬರ್ 8ರಿಂದ 13ರವರೆಗೆ ಮುಚ್ಚಲಾಗಿತ್ತು.
ಕಳೆದ ಅಕ್ಟೋಬರ್‌ನಲ್ಲಿ ಟಾಟಾ ಮೋಟಾರ್ಸ್ ತನ್ನ ಕಂಪನಿಯ 1,200 ತಾತ್ಕಾಲಿಕ ಉದ್ಯೋಗಿಗಳ ಪೈಕಿ 700 ಮಂದಿಯನ್ನು ಮನೆಗೆ ಕಳುಹಿಸಿತ್ತು.
|