ನವದೆಹಲಿ : ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಅಸಮಾನ್ಯ ತೊಂದರೆಗಳು ಎದುರಾಗಿರುವುದರಿಂದ ಫೆಬ್ರವರಿ 16 ರಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ಕಾರ್ಮಿಕ ಆಧಾರಿತ ರಫ್ತು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ವಿತ್ತಖಾತೆಯನ್ನು ವಹಿಸಿಕೊಂಡಿರುವ ವಿದೇಶಾಂಗ ಮಂತ್ರಿ ಪ್ರಣಬ್ ಮುಖರ್ಜಿ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಪ್ರಮುಖ ನಿರ್ಧಾರಗಳನ್ನು ಪ್ರಕಟಿಸದಿದ್ದರೂ ಪರೋಕ್ಷ ತೆರಿಗೆಯನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ ಎಂದು ವಿತ್ತ ಖಾತೆಯ ಅಧಿಕಾರಿಗಳು ತಿಳಿಸಿದ್ದಾರೆ. |