ಮುಂಬೈ : ಪ್ರಸಕ್ತ ವರ್ಷದಲ್ಲಿ ಚಿನ್ನದ ಉತ್ಪಾದನೆ ಇಳಿಕೆಯಾಗಿದ್ದರಿಂದ ಚಿನ್ನದ ದರ ಏರಿಕೆಯಾಗಿದ್ದು, ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆಗಳಿವೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಗೋಲ್ಡ್‌ಮ್ಯಾನ್ ಸಾಚೇಸ್ ಮುಂಬರುವ ದಿನಗಳಲ್ಲಿ ಚಿನ್ನದ ದರದಲ್ಲಿ ಹೆಚ್ಚಳವಾಗಲಿದೆ. ಮುಂಬರುವ ಮೂರು ತಿಂಗಳಲ್ಲಿ ಪ್ರತಿ ಔನ್ಸ್‌ಗೆ 700 ಡಾಲರ್‌ಗಳಿಂದ 1 ಸಾವಿರ ಡಾಲರ್‌ಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ. |