ದೇಶದಲ್ಲಿ ಮತ್ತಷ್ಟು ಬ್ಯಾಂಕ್‌ಗಳ ಶಾಖೆಗಳು ವಿಸ್ತರಿಸುವ ಅವಶ್ಯಕತೆಯಿದ್ದು,ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸುವುದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಸೌಲಭ್ಯ ದೊರಕಿಸಿಕೊಟ್ಟಂತಾಗುತ್ತದೆ ಎಂದು ಕೈಗಾರಿಕೆ ಸಂಘ ಹೇಳಿದೆ.
ದೇಶದಲ್ಲಿ 16,129 ಜನರಿಗೆ ಒಂದು ಬ್ಯಾಂಕ್ ಶಾಖೆ ಲಭ್ಯವಿದೆ. ಆದರೆ ವಿದೇಶದಲ್ಲಿ 1587 ರಿಂದ 4484 ಜನರಿಗೆ ಒಂದು ಶಾಖೆ ಲಭ್ಯವಿದೆ ಎಂದು ಸಮೀಕ್ಷಾ ಸಂಸ್ಥೆ ಎರ್ನೆಸ್ಟ್ ಆಂಡ್ ಯಂಗ್ ಹಾಗೂ ಅಸೋಚಾಮ್ ಜಂಟಿಯಾಗಿ ನಡೆಸಿದ ಅಧ್ಯಯನದ ವರದಿಯಲ್ಲಿ ಪ್ರಕಟಿಸಿದೆ.
ಇಂಗ್ಲೆಂಡ್‌ನಲ್ಲಿ 4484 ಜನರಿಗೆ ಒಂದು ಬ್ಯಾಂಕ್ ಶಾಖೆ,ಅಮೆರಿಕದಲ್ಲಿ 2,720, ಜರ್ಮನಿಯಲ್ಲಿ 1,945 ಜಪಾನ್‌ನಲ್ಲಿ 3,968 , ಹಾಂಗ್‌ಕಾಂಗ್ 454, ಫ್ರಾನ್ಸ್ 1587, ಕೆನಡಾದಲ್ಲಿ 6410 ಸ್ವೀಡನ್ 4672 ಮತ್ತು ಸಿಂಗಾಪೂರ್‌ನಲ್ಲಿ 10,101 ಜನರಿಗೆ ಒಂದು ಬ್ಯಾಂಕ್ ಶಾಖೆ ಲಭ್ಯವಿದೆ ಎಂದು ವರದಿಯಲ್ಲಿ ತಿಳಿಸಿದೆ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸಹಕಾರ ಬ್ಯಾಂಕ್‌ಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸುವುದರಿಂದ ಗ್ರಾಮಾಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅಸೋಚಾಮ್ ಅಧ್ಯಯನ ವರದಿಯಲ್ಲಿ ತಿಳಿಸಿದೆ. |