ಸರಕಾರ ಆರ್ಥಿಕಾಭಿವೃದ್ಧಿಗಾಗಿ ರೂಪಿಸಿದ ಆರ್ಥಿಕ ನೀತಿಗಳು ಮುಂಬರುವ ವರ್ಷದ ಆರ್ಥಿಕ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಪ್ರರ್ಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ 7 ರಷ್ಟಾಗಲಿದೆ ಎಂದು ಡೈ-ಇಚಿ ಲೈಫ್ ಇನ್‌ಸ್ಯೂರೆನ್ಸ್ ಕಂಪೆನಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆರ್ಥಿಕ ಅಭಿವೃದ್ಧಿ ವೇಗದಲ್ಲಿ ನಿಧಾನಗತಿಯಿದೆ ಎನ್ನುವುದನ್ನು ಒಪ್ಪಿಕೊಂಡ ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಆರ್ಥಿಕ ಕುಸಿತವನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮುಂಬರುವ ವರ್ಷದ ಆರ್ಥಿಕ ಸಾಲಿನಲ್ಲಿ ಮೊದಲ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕವೇಗ ನಿಧಾನವಾಗಬಹುದು. ಆದರೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಅರ್ಥಿಕತೆ ವೇಗ ಪಡೆಯಲಿದೆ ಎಂದು ಸಚಿವ ಚಿದಂಬರಂ ಹೇಳಿದ್ದಾರೆ. |