ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ 819 ಬಿಲಿಯನ್ ಡಾಲರ್ ಉತ್ತೇಜನ ಪ್ಯಾಕೇಜ್‌ಗೆ ಸೆನೆಟ್ ಬಹುಮತದಿಂದ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಮೂವರು ರಿಪಬ್ಲಿಕನ್ ಸದಸ್ಯರ ಬೆಂಬಲ ಪಡೆದು 61-37 ರಿಂದ ಅಂಗೀಕಾರವಾಗಿದೆ. 108 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿನ ಮೊತ್ತದ ಪ್ಯಾಕೇಜ್‌ಗೆ ತಾವು ವಿರೋಧಿಸುವುದಾಗಿ ರಿಪಬ್ಲಿಕನ್ ಪಕ್ಷದ ಸದಸ್ಯರ ನಿಲುವಿನಿಂದಾಗಿ ಉತ್ತೇಜನ ಪ್ಯಾಕೇಜ್ ಸಮ್ಮತಿಗೆ ಸದನದಲ್ಲಿ ಕಠಿಣ ಪರಿಸ್ಥಿತಿ ಎದುರಾಗಿತ್ತು.ಶಾಲಾ ಕಟ್ಟಡಗಳು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪೀಡಿತ ರಾಜ್ಯಗಳಿಗೆ ನೆರವು ನೀಡಲು ಪ್ಯಾಕೇಜ್‌ಗೆ ಸಮ್ಮತಿಸಬೇಕು ಎಂದು ಬರಾಕ್ ಮನವಿ ಮಾಡಿದ್ದರು.
ಸಂಸತ್ತು ಉತ್ತೇಜನ ಪ್ಯಾಕೇಜ್‌ಗೆ ಅಂಗೀಕಾರ ನೀಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಅಮೆರಿಕದ ಆರ್ಥಿಕ ಸ್ಥಿತಿ ಕಂಗೆಟ್ಟು ಅನೇಕ ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಬರಾಕ್ ಎಚ್ಚರಿಸಿದ್ದರು.
ಶ್ವೇತ ಭವನದಲ್ಲಿ ಬಲಿಷ್ಟ ರಿಪಬ್ಲಿಕನ್ ಸದಸ್ಯರ ವಿರೋಧದ ನಡುವೆ ಡೆಮಾಕ್ರೆಟಿಕ್ ಸದಸ್ಯರು ಉತ್ತೇಜನ ಪ್ಯಾಕೇಜ್‌ಗೆ ಬೆಂಬಲಿಸಿ ಸದನದ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾದರು ಎಂದು ಸಂಸತ್ತಿನ ಮೂಲಗಳು ತಿಳಿಸಿವೆ. |