ನವದೆಹಲಿ : ಜಾಗತಿಕ ಆರ್ಥಿಕ ಕುಸಿತದಿಂದಾಗಿ ಎದುರಾದ ಉದ್ಯೋಗಿಗಳ ಹುದ್ದೆ ಕಡಿತ ನಿವಾರಣೆಗೆ ಮತ್ತಷ್ಟು ಪ್ಯಾಕೇಜ್‌ಗಳನ್ನು ಘೋಷಿಸುವದಲ್ಲದೇ ಸೂಕ್ತ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲಿದೆ ಎಂದು ವಾಣಿಜ್ಯ ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.
ಕಾರ್ಮಿಕ ಆಧಾರಿತ ಕೆಲ ಕ್ಷೇತ್ರಗಳಿಗೆ ಉತ್ತೇಜನ ಪ್ಯಾಕೇಜ್ ಘೋಷಿಸುವ ಮೂಲಕ ಹುದ್ದೆ ಕಡಿತವಾಗದಂತೆ ನೋಡಿಕೊಳ್ಳಲು ಸರಕಾರ ಬದ್ದವಾಗಿದೆ ಎಂದು ಸಚಿವ್ ಕಮಲ್‌ನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರ ಕಡಿತ ಘೋಷಿಸುವ ಸಾಧ್ಯತೆಗಳಿದ್ದು, ಕೈಗರಿಕೆ ಅಭಿವೃದ್ಧಿಗೆ ಹೆಚ್ಚಿನ ಸಹಕಾರವನ್ನು ನೀಡಲು ಸರಕಾರ ಬದ್ದವಾಗಿದೆ, ನವೆಂಬರ್ ತಿಂಗಳಲ್ಲಿ ಉಕ್ಕು, ವಾಹನೋದ್ಯಮ ಕ್ಷೇತ್ರಗಳು ಕುಸಿತ ಕಂಡಿದ್ದು ಇದೀಗ ಚೇತರಿಸಿಕೊಂಡಿವೆ ಎಂದು ಸಚಿವ್ ಕಮಲ್‌ನಾಥ್ ಹೇಳಿದ್ದಾರೆ. |