ಏಷ್ಯಾ ಶೇರುಪೇಟೆಯಲ್ಲಿ ವಹಿವಾಟು ಕುಸಿತದಿಂದಾಗಿ ದೇಶಿಯ ಶೇರುಪೇಟೆಯಲ್ಲಿ ಬಂಡವಾಳದ ಹೊರಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಮತ್ತೆ 14ಪೈಸೆ ಕುಸಿತ ಕಂಡಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್‌ಗೆ 48.86 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 14 ಪೈಸೆ ಕುಸಿತವಗುವುದರೊಂದಿಗೆ ಡಾಲರ್‌ಗೆ 48.72/73 ರೂಪಾಯಿಗಳಿಗೆ ತಲುಪಿದೆ.
ಏಷ್ಯಾ ಶೇರುಪೇಟೆಗಳ ವಹಿವಾಟಿನಲ್ಲಿ ಇಳಿಕೆ ಕಂಡು ಬಂದಿದ್ದರಿಂದ ದೇಶಿಯ ಶೇರುಪೇಟೆ ಕುಸಿತವಾಗಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಆತಂಕದಿಂದಾಗಿ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. |