ಡೆಟ್ರಾಯಿಟ್ : ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಜನರಲ್ ಮೋಟಾರ್ಸ್ ವಾಹನೋದ್ಯಮ ಸಂಸ್ಥೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಡೆಟ್ರಾಯಿಟ್ ಮೂಲದ ವಾಹನೋದ್ಯಮ ಸಂಸ್ಥೆ ಜನರಲ್ ಮೋಟಾರ್ಸ್, ಪ್ರಮುಖ ಹಂತಗಳಲ್ಲಿರುವ ಉದ್ಯೋಗಿಗಳು ಸೇರಿದಂತೆ ವ್ಯವಸ್ತಾಪಕರನ್ನು ಕೂಡಾ ಹುದ್ದೆಯಿಂದ ವಜಾಗೊಳಿಸಲು ಅಡಳಿತ ಮಂಡಳಿ ತೀರ್ಮಾನಿಸಿದೆ. ಮತ್ತು ಇತರ ಉದ್ಯೋಗಿಗಳ ವೇತನದಲ್ಲಿ ಕಡಿತ ಮಾಡುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮುಂಬರುವ ಮೂರು ವರ್ಷದಲ್ಲಿ ಕಂಪೆನಿಯಲ್ಲಿರುವ 96,537 ಉದ್ಯೋಗಿಗಳಲ್ಲಿ ಸುಮಾರು 30 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಗ್ರಾಹಕರ ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ ವಾಹನೋದ್ಯಮ ಸಂಸ್ಥೆಗಳು ಅಪಾರ ನಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಜನರಲ್ ಮೋಟಾರ್ಸ್‌ನ ಮುಖ್ಯ ವ್ಯವಸ್ಥಾಪಕ ರಿಕ್ ವಾಗೊನೆರ್ ತಿಳಿಸಿದ್ದಾರೆ. |