ನವದೆಹಲಿ : ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಆರ್ಥಿಕ ಅಭಿವೃದ್ಧಿ ದರ ಶೇ.7ಕ್ಕೆ ತಲುಪಿದಲ್ಲಿ ನಿರೀಕ್ಷೆಗಿಂತ ಉತ್ತಮವಾಗಿರುತ್ತದೆ. ಆರ್ಥಿಕತೆಯನ್ನು ಉತ್ತೇಜಿಸಲು ಸಾರ್ವಜನಿಕ ವೆಚ್ಚದಲ್ಲಿ ಹೆಚ್ಚಳವಾಗುವ ಅಗತ್ಯವಿದೆ ಎಂದು ಮೊಂಟೆಕ್ ಹೇಳಿದ್ದಾರೆ.
ಮುಂದಿನ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಸಮೀಕ್ಷೆಯಂತೆ ಆರ್ಥಿಕ ಅಭಿವೃದ್ಧಿ ದರ ಶೇ.7ಕ್ಕೆ ತಲುಪುವ ಸಾಧ್ಯತೆಗಳಿವೆ. ಇಂತಹ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಉತ್ತಮವಾದ ಗುರಿಯಾಗಿದೆ ಎಂದುಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲೂವಾಲಿಯಾ ಹೇಳಿದ್ದಾರೆ.
ಕೇಂದ್ರ ಲೆಕ್ಕ ಪರಿಶೋಧಕ ಸಂಘ ಕಳೆದ ವರ್ಷ ಶೇ 9.ರಷ್ಟಿದ್ದ ಹಣದುಬ್ಬರ ದರ ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಜಿಡಿಪಿ ದರ ಶೇ.7.11 ರಷ್ಟಾಗಲಿದೆ ಎಂದು ಪ್ರಕಟಿಸಿದೆ. |