ಕೊಚ್ಚಿ : ದೇಶದ ಟೆಲಿಕಾಂ ಕ್ಷೇತ್ರದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಏರ್‌ಸೆಲ್, ಕೇರಳದಲ್ಲಿ ಜಿಎಸ್‌ಎಂ ಸೇವೆಯನ್ನು ಆರಂಬಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುದೀಪ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ ಕೇರಳ ಮಾರುಕಟ್ಟೆಯನ್ನು ಪ್ರವೇಶಿಸಲು ಹೆಮ್ಮೆಯನಿಸುತ್ತದೆ. ಏರ್‌ಸೆಲ್ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಐದನೇ ಸ್ಥಾನವನ್ನು ಪಡೆದಿದ್ದು, ಸುಮಾರು 16 ಮಿಲಿಯನ್ ಗ್ರಾಹಕರನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಕೇರಳ ಗ್ರಾಹಕರಿಗಾಗಿ ನೂತನ ಸೇವೆ ಮತ್ತು ಉತ್ಪನ್ನಗಳನ್ನು ಪರಿಚಯಿಸಲಾಗುತ್ತಿದ್ದು, ಗಲ್ಫ್‌ಗೆ ಎಸ್‌ಟಿಡಿ ಕರೆ ಪ್ರತಿನಿಮಿಷಕ್ಕೆ 5.99 ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಸುಮಾರು 500 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದ್ದು,ಮುಂಬರುವ ಎರಡು ವರ್ಷದಲ್ಲಿ ಸಾವಿರ ಕೋಟಿ ಹೂಡಿಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಶೇ 42 ರಷ್ಟು ಗ್ರಾಹಕರು ಮೊಬೈಲ್ ಸಂಪರ್ಕವನ್ನು ಪಡೆದವರಾಗಿದ್ದು,ಏರ್‌ಸೆಲ್ ಕಂಪೆನಿ ಸೇವಾ ವಿಸ್ತರಣೆಗೆ ವಿಫುಲ ಅವಕಾಶಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. |