ಮುಂಬೈ : ಸತ್ಯಂ ನಿರ್ದೇಶಕ ಮಂಡಳಿ ಆರ್ಥಿಕ ಹೊಂದಾಣಿಕೆ ಹಾಗೂ ಕಾನೂನಿನ ಅಡತಡೆಗಳು ಕುರಿತಂತೆ ಚರ್ಚಿಸಲು ಮುಂಬೈನಲ್ಲಿ ಫೆಬ್ರವರಿ 12 ರಂದು ಸಭೆ ಆಯೋಜಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿ ಸಿಬ್ಬಂದಿಯ ವೇತನ ಹಾಗೂ ಇನ್ನಿತರ ಅಗತ್ಯ ಆರ್ಥಿಕ ಸಮಸ್ಯೆಗಳಿಗೆ ಇತರ ಬ್ಯಾಂಕ್‌ಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಮತ್ತು ಕಂಪೆನಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಸಭೆಯ ಮೂಲ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ದಿನಾಂಕವನ್ನು ಸತ್ಯಂ ಕಂಪ್ಯೂಟರ್ ವಕ್ತಾರರು ಖಚಿತಪಡಿಸಿದ್ದು, ದೇಶ ಹಾಗೂ ವಿದೇಶಗಳಲ್ಲಿರುವ ಸಿಬ್ಬಂದಿಗಳ ವೇತನ ಕಚೇರಿಗಳ ಬಾಡಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಬಾಕಿಯನ್ನು ಭರಿಸಲು ಸತ್ಯಂ ನಿರ್ದೇಶಕರ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕದಲ್ಲಿರುವ ಸತ್ಯಂ ಉದ್ಯೋಗಿಗಳಿಗೆ ಫೆಬ್ರವರಿ 19 ರೊಳಗಾಗಿ ವೇತನ ನೀಡುವ ನಿರ್ದೇಶನವಿದ್ದು, ಈಗಾಗಲೇ ಬ್ಯಾಂಕ್ ಆಫ್ ಬರೋಡಾ ಮತ್ತು ಐಡಿಬಿಐನಿಂದ 600 ಕೋಟಿ ರೂ.ಗಳ ಸಾಲವನ್ನು ಪಡೆದಿದೆ ಎಂದು ವಕ್ತಾರರು ತಿಳಿಸಿದ್ದಾರೆ. |