ನವದೆಹಲಿ : ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವೇತನ ಹೆಚ್ಚಳ ಕುರಿತಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ, ಸಿಟಿಗ್ರೂಪ್ ಸಿಇಒ ವಿಕ್ರಂ ಪಂಡಿತ್ ಒಂದು ವರ್ಷದವರೆಗೆ ಕೇವಲ 1 ಡಾಲರ್ ಮಾಸಿಕ ವೇತನವನ್ನು ಪಡೆಯುವುದಾಗಿ ಮತ್ತು ಬೋನಸ್ ಕೂಡಾ ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಸಿಟಿಗ್ರೂಪ್ ಬ್ಯಾಂಕ್ ಸರಕಾರದಿಂದ 45 ಬಿಲಿಯನ್ ಡಾಲರ್ ಬೇಲೌಟ್ ಪ್ಯಾಕೇಜ್ ಪಡೆದಿದ್ದು, ಬ್ಯಾಂಕ್ ಲಾಭದತ್ತ ಮರಳುವವರೆಗೆ ತಾವು ಕೇವಲ ಒಂದು ಡಾಲರ್ ಮಾಸಿಕ ವೇತನವನ್ನು ಪಡೆಯುವುದಾಗಿ ಹೇಳಿದ್ದಾರೆ
ಅಮೆರಿಕ ಸಂಸತ್ತಿನ ಜನಪ್ರತಿನಿಧಿಗಳು 8 ಪ್ರಮುಖ ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ 350 ಬಿಲಿಯನ್ ಪ್ಯಾಕೇಜ್‌ಗಳನ್ನು ಉಪಯೋಗಿಸುವ ವೈಖರಿಯ ಬಗ್ಗೆ ಕೇಳಿದಾಗ ವಿಕ್ರಂ ಪಂಡಿತ್ ವಿವಿರಣೆ ನೀಡಿದ್ದಾರೆ. |