ಅಪೋಲೊ ಟೈರ್ಸ್ ಕಂಪೆನಿ, ಗುತ್ತಿಗೆ ಹಾಗೂ ದಿನಗೂಲಿ ಆಧಾರಿತ ಸುಮಾರು 1500 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಓಂಕಾರ ಸಿಂಗ್ ಕನ್ವರ್ ತಿಳಿಸಿದ್ದಾರೆ.
ಕಂಪೆನಿಯಲ್ಲಿ ಸುಮಾರು 10 ಸಾವಿರ ಉದ್ಯೋಗಿಗಳಿದ್ದು ಖಾಯಂ ಉದ್ಯೋಗಿಗಳನ್ನು ಹೊರತುಪಡಿಸಿ ಶೇ.15 ರಷ್ಟು ಹುದ್ದೆಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಅಪೋಲೊ ಟೈರ್ಸ್ ಔದ್ಯೋಗಿಕ ಸರಾಸರಿಗಿಂತ ಹೆಚ್ಚಿನ ಲಾಭದತ್ತ ಸಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಕನ್ವರ್ ತಿಳಿಸಿದ್ದಾರೆ. |