ಕಳೆದ ಐದು ವರ್ಷಗಳಿಂದ ಪ್ರಯಾಣಿಕ ಪರ ಬಜೆಟ್ ಮಂಡಿಸಿದ ಕೇಂದ್ರ ರೈಲ್ವೆ ಖಾತೆ ಸಚಿವ ಲಾಲು ಪ್ರಸಾದ್ ಯಾದವ್ ನಾಳೆ ಮಧ್ಯಂತರ ಬಜೆಟ್ ಮಂಡಿಸುವ ನಿರೀಕ್ಷೆಗಳಿವೆ ಎಂದು ಮೂಲಗಳು ತಿಳಿಸಿವೆ.
ಯುಪಿಎ ಸರಕಾರದ ಅಧಿಕಾರವಧಿಯಲ್ಲಿ ಕಚ್ಚಾ ತೈಲ ದರಗಳ ಏರಿಕೆಯ ಮಧ್ಯೆಯು ಪ್ರಯಾಣ ದರ ಹೆಚ್ಚಳ ಮಾಡದೇ ಜನಸಾಮಾನ್ಯರ ಪ್ರಂಶಸೆಗೆ ಪಾತ್ರರಾದ ಸಚಿವ ಲಾಲು ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜನಪರ ಬಜೆಟ್ ಮಂಡಿಸಲಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಪ್ರಸಕ್ತ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗಿದ್ದರಿಂದ ಅದರ ಸದುಪಯೋಗವನ್ನು ಪ್ರಯಾಣಿಕರಿಗೆ ನೀಡಬೇಕು ಎನ್ನುವುದು ಸಚಿವ ಲಾಲುಪ್ರಸಾದ್ ಯಾದವ್ ಉದ್ದೇಶವಾಗಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯು ಜನೆವರಿ ತಿಂಗಳ ಅವಧಿಯಲ್ಲಿ ರೈಲ್ವೆ ಇಲಾಖೆ 74.55 ಮಿಲಿಯನ್ ಟನ್ ಸರಕು ಸಾಗಾಣೆ ಮಾಡಿ ಕಳೆದ ವರ್ಷಕ್ಕಿಂತ ಶೇ.2.9 ರಷ್ಟು ಹೆಚ್ಚಳ ಸಾಧಿಸಿದೆ. ಯುಪಿಎ ಸರಕಾರದ ಅವಧಿಯಲ್ಲಿ ರೈಲ್ವೆ ಇಲಾಖೆ ಶೇ.14 ರಷ್ಟು ವಾರ್ಷಿಕ ಅಭಿವೃದ್ಧಿಯನ್ನು ಸಾಧಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. |