ದೇಶದ ವಾರ್ಷಿಕ ಹಣದುಬ್ಬರ ಕಳೆದ ವಾರ ಶೇ.5.07 ರಷ್ಟಿದ್ದ ಹಣದುಬ್ಬರ ದರ, ಜನೆವರಿ 31ಕ್ಕೆ ಅಂತ್ಯಗೊಂಡಂತೆ ಶೇ.4.39 ರಷ್ಟು ಇಳಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರ ಘೋಷಿಸಿದ ಉತ್ತೇಜನ ಪ್ಯಾಕೇಜ್‌ಗಳ ಮಧ್ಯೆಯು ಕೈಗಾರಿಕೆ ಸೂಚ್ಯಂಕ ಶೇ.2ರಷ್ಟು ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಹಣದುಬ್ಬರ ದರದಲ್ಲಿ ಸಗಟು ದರ ಕೈಗಾರಿಕೆ ಸೂಚ್ಯಂಕ ಕಳೆದ ವರ್ಷ ಶೇ.4.74 ರಷ್ಟಿತ್ತು ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಬಹಿರಂಗಪಡಿಸಿದ್ದಾರೆ.
ಇಂಧನ ಸೂಚ್ಯಂಕದಲ್ಲಿ ಶೇ.3.1 ರಷ್ಟು ಕುಸಿತ,ಪೆಟ್ರೋಲ್ ಶೇ.11ರಷ್ಟು, ಅಡುಗೆ ಅನಿಲ ಶೇ.8 ರಷ್ಟು ಮತ್ತು ಡೀಸೆಲ್ ಶೇ.7 ರಷ್ಟು ಇಳಿಕೆಯಾಗಿದ್ದರಿಂದ ಹಣದುಬ್ಬರ ದರದಲ್ಲಿ ಇಳಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. |